ರಾಮಾಯಣ ಮಾನಸೋದ್ಯಾನ

ಭಾರತದ ಸನಾತನ ಸಂಸ್ಕೃತಿಯನ್ನು ಸಾರುವ ಪುರಾಣ ಪ್ರಸಿದ್ದ ಮಹಾಕಾವ್ಯ ’ರಾಮಯಣ’. ಎಲ್ಲಿ ರಾಮನಿದ್ದಾನೋ, ಅಲ್ಲಿ ಹನುಮನಿದ್ದಾನೆ. ಎಲ್ಲಿ ಹನುಮನಿದ್ದಾನೋ, ಅಲ್ಲಿ ರಾಮನಿದ್ದಾನೆ. ರಾಮ ಹನುಮರದ್ದು ’ಅವಿನಾಭವ’ ಸಂಭಂಧ. ರಾಮ ಹನುಮರ ಮಹಿಮಾತಿಶಯಗಳಿಂದ ಕೂಡದ ದಿವ್ಯ ಕಥಾನವೇ ’ರಾಮಯಣ’ ಹನುಮಗಿರಿಯಲ್ಲಿ ರಾಮಯಣದ ಪ್ರಮಿಖ ಘಟಣೆಗಳನ್ನು ಶಿಲೆಯಲ್ಲಿ ಕೆತ್ತಿ, ಘಟಣೆಯ ವಿವರಹ್=ಗಳನ್ನು ಅಮೃತಶಿಲೆಯಲ್ಲಿ ಮುದ್ರಿಸಿ ಅದರೊಂದಿಗೆ ಕ್ರಮಬದ್ಧವಾಗಿ ಜೋಡಿಸಲಾಗಿದೆ. ರಾಮಾಯಣ ಮಾನಸೋಧ್ಯಾನದಲ್ಲಿ ಹೆಜ್ಜೆ ಹಾಕಿದರೆ, ಇಡೀ ರಾಮಾಯಣದ ಕಥಾನಕವೇ ಕಣ್ಣ ಮುಂದೆ ಬಂದಂತಾಗುತ್ತದೆ.

ಭಾರತೀಯ ಸಂಸ್ಕೃತಿಯ ಆದರ್ಶ ಕಾವ್ಯ ರಾಮಾಯಣದ ತತ್ವಾದರ್ಶಗಳು ಸಾಮಾನ್ಯ ಜನರಿಗೆ ಅರ್ಥ ಆಗುವಂತೆ ಮತ್ತು ಪ್ರಭಾವ ಬೀರುವಮ್ತೆ ಈ ಮೂಲಕ ಸಮಾಜದಲ್ಲಿ ಉತ್ತಮ ರೀತಿಯ ಪರಿವರ್ತನೆ ತರಲು ಸಾದ್ಯ.

ಹನುಮಗಿರಿಯ ದ್ವಾರದ ಎಡಭಾಗದಲ್ಲಿ ನಿರ್ಮಿಸಲಾಗಿರುವ ರಾಮಾಯಣ ಮಾನಸೋಧ್ಯಾನದಲ್ಲಿ, ರಾಮಯಣದ ಪ್ರಮುಖ ಘಟಣೆಗಳಾದ ಪುತ್ರಕಾಮೇಷ್ಠಿ, ರಾಮ ಭರತ ಲಕ್ಷ್ಮಣ ಶತ್ರುಘ್ನರ ಜನನ, ಯಜ್ನಸಂರಕ್ಷನೆ ಅಹಲ್ಯೋದ್ದಾರ, ಸೀತಾ ಸ್ವಯಂವರ, ಭಾರ್ಗವ ಗರ್ವಭಂಗ, ಶ್ರೀರಾಮ ಪಟ್ಟಾಭಿಷೇಕದ ಸಂಕಲ್ಪ, ಶ್ರೀರಾಮ ವನಾಭಿಗಮನ, ಗಂಗೋತ್ತರಣ, ಪಾದುಕಾಪ್ರಸಂಗ, ವಿರಾಧನ ಶಾಪ ವಿಮೋಚನೆ, ಶಿರಭಂಗ ವೃತ್ತಾಂತ, ಶೂರ್ಪನಖಾ ಮಾನಭಂಗ, ಮಾಯಾಮೃಗ ಭೇಧನ, ಸೀತಾಪಹಾರ, ಜಟಾಯು ಮೋಕ್ಷ, ಶಬರಿ ಮೋಕ್ಷ, ಹನುಮದ್ದ್ರ್ಶನ, ಸುಗ್ರೀವ ಸಖ್ಯ, ವಾಲಿ ಸಂಹಾರ, ಸಮಿದ್ರೋಲ್ಲಂಘನ, ಚೂಡಾಮಣಿ ಪ್ರದಾನ, ಲಂಕಾದಹನ, ವಿಭೀಷಣ ಶರಣಾಗತಿ, ಸೇತುಬಂಧನ, ಕೌಂಭಕರ್ಣ ವಧೆ, ಸಂಜೀವಿನಿ ಪ್ರಯೋಗ, ಇಂದ್ರಜಿತುವಧೆ, ರಾವಣ ಮೋಕ್ಷ, ವಿಭಿಷಣಾ ಪಟ್ಟಾಭಿಷೇಕ, ಸೀತೀಯ ಅಗ್ನಿಪರೀಕ್ಷೆ, ಶ್ರೀರಾಮ ಪಟ್ಟಾಭಿಷೇಕಗಳನ್ನು ಶಿಲಾಕೃತಿ ಮತ್ತು ವಿವರಣಾ ಫಲಕದಿಂದ ತಿಳಿಯಬೇಕಾಗಿದೆ.

ವಿಶ್ವದಲ್ಲೇ ಎಲ್ಲೂ ಕಾಣಸಿಗದ ಈ ವಿಶಿಷ್ಟ ಶಿಲಾಕಾರ್ಯ ರಾತ್ರಿಯ ಹೊತ್ತು ದೀಪದ ಬೆಳಕಿನಲ್ಲಿ ಅಲಂಕೃತಗೊಂಡು ಕಲಾವೈಭವವನ್ನು ಸಾಕ್ಷಾತ್ಕರಿಸುತ್ತದೆ.

ರಾಮಾಯಣ ಮಾನಸೋದ್ಯಾನದ ಒಂದು ಇಣುಕುನೋಟವನ್ನು ಆಧುನಿಕ ಫ್ಲ್ಯಾಷ್ ಚಿತ್ರಪ್ರದರ್ಶನದ ಮುಖಾಂತರ ಪಡೆಯಲು ಮೇಲ್ಕಂಡ ಚಿತ್ರದ ಮೇಲೆ ಕ್ಲಿಕ್ಕಿಸಿ..


ರಾಮಾಯಣ ಮಾನಸೋದ್ಯಾನದ ಒಂದು ಇಣುಕುನೋಟವನ್ನು ಫೋಟೊಗಳನ್ನು ಗ್ಯಾಲರಿಯಲ್ಲಿ ನೋಡಲು ಫೋಟೊದ ಮೇಲೆ ಕ್ಲಿಕ್ಕಿಸಿ.