ಹನುಮಗಿರಿಯ ಬಗ್ಗೆ

  ಕಾವು ಮಾರ್ಗವಾಗಿ 5 ಕಿ.ಮೀ.ಈಶ್ವರಮಂಗಲ ರಸ್ತೆಯಲ್ಲಿ ಪ್ರವೇಶದ್ವಾರ ಇದೆ. ಹತ್ತಾರು ಹೆಜ್ಜೆ ಮುಂದೆ ಹೋದಾಗ ಆಂಜನೇಯ ಕ್ಷೇತ್ರವನ್ನು ಕಾಣಬಹುದು. ಮುಂಬಾಗದಲ್ಲಿ ಚಿಕ್ಕದಾದ ಸುಂದರವಾದ ಪ್ರವೇಶ ಮಂಟಪವಿದೆ. ಒಳಗೆ ಕಾಲಿರಿಸಿದಾಗ ರಾಮಯಣ ಮಾನಸೋಧ್ಯಾನವು ಮನವನ್ನು ಪುಳಕಗೊಲಿಸುತ್ತದೆ. ಎಡಭಾಗದಲ್ಲಿ ಗೋಡೆಗೆ ತಾಗಿಸಿದಂತೆ ರಾಮಯಣದ ಕಥಾನಕಗಳನ್ನು ಶಿಲೆಯಲ್ಲಿ ಕೆತ್ತಿ, ಫಲಕಗಳಲ್ಲಿ ವಿವರಗಳನ್ನು ಇಡಲಾಗಿದೆ. ಪುತ್ರಕಾಮೇಷ್ಟಿ, ರಾಮಭರತ ಲಕ್ಷ್ಮಣ ಶತ್ರುಘ್ನರ ಜನನ, ಯಜ್ನಸಂರಕ್ಷಣೆ, ಅಹಲ್ಯೋದ್ದಾರ, ಸೀತಾ ಸ್ವಯಂವರ, ಭಾರ್ಗವ ಗರ್ವಭಂಗ, ಶ್ರೀರಾಮ ಪಟ್ಟಭಿಷೇಕದ ಸಂಕಲ್ಪ ಶ್ರೀರಾಮ ವನಾಭಿಗಮನ, ಗಂಗೋತ್ತರಣ, ಪಾದುಕಾಪ್ರಸಂಗ, ವಿರಾಧನ ಶಾಪ ವಿಮೋಚನೆ, ಶಿರಭಂಗ ವೃತ್ತಾಂಗ, ಶೂರ್ಪನಖಾ ಮಾನಭಂಗ, ಮಾಯಮೃಗ ಭೇಧನ, ಸೀತಾ ಅಪಹಾರ, ಜಟಾಯು ಮೋಕ್ಷ, ಶಬರಿ ಮೋಕ್ಷ ಹನುಮದ್ದರ್ಶನ, ಸುಗ್ರೀವ ಸಖ್ಯ, ವಾಲಿ ಸಂಹಾರ, ಸಮುದ್ರೋಲ್ಲಂಘನ, ಚೂಡಾಮಣಿ ಪ್ರದಾನ, ಲಂಕಾದಹನ, ವಿಭೀಷಣ ಶರಣಾಗಾತಿ, ಸೇತುಬಂಧನ, ಕುಂಭಕರ್ಣ ವಧೆ, ಸಂಜೀವಿನಿ ಪ್ರಯೋಗ, ಇಂದ್ರಜಿತುವಧೆ, ರಾವಣ ಮೋಕ್ಷ, ವಿಭೀಷಣ ಪಟ್ಟಭಿಷೇಕ, ಸೀತೆಯ ಅಗ್ನಿಪರೀಕ್ಷೆ, ಶ್ರೀರಾಮ ಪಟ್ಟಾಭಿಷೇಕ – ಹೀಗೆ ರಾಮಯಣದ ಪ್ರಮುಖ ಘಟನೆಗಳನ್ನು ಶಿಲಾಕೃತಿ ಮತ್ತು ವಿವರಣಾ ಫಲಕಗಳಿಂದ ತಿಳಿಯಬಹುದು. ಒಟ್ಟಿನಲ್ಲಿ ಅಲ್ಲಿ ಸಂಪೂರ್ಣ ರಾಮಯಣವೇ ಮೂಡಿಬಂದಿದೆ. ಹಚ್ಚನೆಯ ಹಸಿರಾದ ಹುಲ್ಲು, ಪುಷ್ಪ ಸಮೃದ್ದವಾದಾ ಗಿಡ ಬಳ್ಳಿಗಳು, ಅವುಗಳ ನಡುವೆ ಮುಂದೆ ಸಾಗುವ ಕಾಲುದಾರಿ, ಮೈಮನಗಳನ್ನು ಪುಳಕಿತಗೊಳಿಸುತ್ತವೆ. ಮೆಟ್ಟಿಗಳನ್ನೇರಿಸಿಕೊಂಡು ಕ್ಷೇತ್ರದ ಪ್ರಧಾನ ಭಾಗವಾದ ಆಂಜನೇಯ ಮಂದಿರಕ್ಕೆ ತಲುಪಿದಾಗ ಭಕ್ತಿ ಭಾವ ಪರವಶನಾಗಿಸಾಷ್ಟಾಂಗ ಪ್ರಣಾಮ ಸಲ್ಲಿಸುತ್ತೇವೆ.  ಪಂಚಮುಖಿ ಆಂಜನೇಯನ ವಿಗ್ರಹವು ತೆರೆದೆದೆಯ ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಭಕ್ತರಿಗೆ ವಿಶ್ರಾಂತಿ ಪಡೆಯಲು ಮತ್ತು ಧಾರ್ಮಿಕ ವಿಧಿಗಳನ್ನು ನೆರವೇರಿಸುವ ನರಸಿಂಹ ಮಂಟಪವು ಎಡಭಾಗದಲ್ಲಿದೆ. ಪಶ್ಚಿಮಭಾಗದಲ್ಲಿ ಪಡುಭಾಗದ ಕೋಣೆಯಲ್ಲಿ ಪವಮಾನ ರಥವಿದೆ.

ಗರುಡ ಮಂಟಪವನ್ನು ದಾಟಿ ಮುಂದೆ ಹೋದಾಗ ’ಹನುಮಾನ್ ಮಾನಸೋದ್ಯಾನ’ ಮತ್ತು ’ಸಂಜೀವಿನಿ’ ದಿವ್ಯೌಷಧ ಸಸ್ಯಗಳ ವನವಿದೆ. ಅಲ್ಲಲ್ಲಿ ಅಂಜನೇಯನ ಜನನ ಮೊದಲ್ಗೊಂಡು ರಾಮಾವತಾರ ಸಮಾಪ್ತಿಯ ತನಕದ, ಹಾಗೂ ದ್ವಾಪರಾಯುಗದಲ್ಲಿ ಆಂಜನೇಯ ಸೇವಾ ಕೈಂಕರ್ಯದ ಕಥಾನಕಗಳನ್ನು ಶಿಲೆಗಳಲ್ಲಿ ಕೆತ್ತಲಾಗಿದೆ. ರಾಮಾಯಣ ಮತ್ತು ಹನುಮಾಯಣಗಳನ್ನು ಶಿಲ್ಪಾ ಕಲಾ ಸೊಗಡಿನ ಮೂಲಕ ಆಸ್ವಾದಿಸುವ ಅವಕಾಶ ಪ್ರಾಯಶಃ ಹನುಮಗಿರಿಯಲ್ಲಿ ಮಾತ್ರ ಕಾನಬಹುದಾಗಿದೆ. ತನ್ಮಧ್ಯೆ ಜ್ಞಾನ ಮಂದಿರವಿದೆ. ಸಾಧುಸಂತರು, ಪಿಸಾಸುಗಳು ಜ್ಞಾನ, ಜಪತಪ, ಅನುಷ್ಟಾನಗಳನ್ನು ಪೂರೈಸುವ ಅವಕಾಶ ಜ್ಞಾನಮಂದಿರದಲ್ಲಿದೆ; ಅನತಿ ದೂರದಲ್ಲಿ ಕೋದಂಡಪಾಣಿಯಾದ ಶ್ರೀರಾಮ ಮತ್ತು ರಾಮಭಜನೆಯಲ್ಲಿ ತಲ್ಲೀನನಾದ ಆಂಜನೇಯನ ವಿಗ್ರಹಗಳಿವೆ.

ಹನ್ನೊಂದು ಅಡಿ ಎತ್ತರದ  ಶ್ರೇಷ್ಠವಾದ ಕೃಷ್ಣಶಿಲೆಯಲ್ಲಿ ಕೆತ್ತಿದ ಪಂಚವಟಿಯ ಆಂಜನೇಯನ ಏಕಶಿಲಾ ವಿಗ್ರಹ ವಿವರಣಾ ಫಲಕಗಳ ಸಮೇತ ರಾಮಯಣ ಕಥಾಣಕಗಳ ಸುಮಾರು ನೂರರಷ್ಟು ಶಿಲ್ಪಕಲಾಕೆತ್ತನೆಯ ಸೊಗಡು ನಿಸರ್ಗದತ್ತ ಕಲ್ಲು ಬಂಡೆಗಳಲ್ಲಿ ಕೆತ್ತಲಾಗಿರುವ ಆಂಜನೇಯನ ಜೀವನದ ಪುಣ್ಯಕಥಾ ಪ್ರಸಂಗಗಳು ದೇವ, ಜೀವಾ ‍ಸತ್ಸಂಧ ಸೂಚಕ ರಾಮ ಹನುನ ವಿಗ್ರಹಗಳು ಇವು ಈಕ್ಷೇತ್ರದ ವಿಶೇಷತೆಗಳು.

ಶಿಲ್ಪಕಲೆ ಪ್ರೌಢಮಿಯ ಶಿಲಾವೈಭವಕ್ಕೆ ಇದೊಂದು ಅಪೋರ್ವ ಮಾದರಿ, ರಾಮ-ಲಕ್ಷ್ಮಣ ಶುಶ್ರೂಷೆಗಾಗಿ ಹನುಮಂತನು ಪಂಚಮುಖಿ ಸ್ವರೂಪ ತಾಳಿ, ಹಿಮಾದ್ರಿಯ ಸೇರಿ ದ್ರೋಣಾಚಲವನ್ನೇ ಎತ್ತಿ ತಂದ ಘಟನೆಯು ರಾಮಾಯಣದ ಸಾಹಸಗಾಧೆ ಸಂಜೀವಿನಿಯಂತಹ ಜೀವಸಂರಕ್ಷೆಯ ಗಿಡಮೂಲಿಕೆಗಳು ಔಷಧಿಯ ಸಸ್ಯಗಳು ಇಂದಿಗೂ ಸರ್ವಜನ ಮಾನ್ಯವಾಗಿದೆ. ಅಂತಹ ಸಸ್ಯ-ಪ್ರಭೇದಗಳನ್ನು ಪೋಷಿಸುವ ಪರಿಚಯಿಸುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ಶ್ರೀಕ್ಷೇತ್ರದಲ್ಲಿ ಸಂಜೀವಿನಿ ಉದ್ಯಾನವನ ನಿರ್ಮಾಣವಾಗಿದೆ.

ಆಡಳಿತ ಮಂಡಳಿ

ಮಹಾಬಲೇಶ್ವರ ಭಟ್ ಮಹಾಪೋಷಕರು ನನ್ಯ ಅಚ್ಯುತ ಮೂಡೆತ್ತಾಯ ಆಡಳಿತ ಧರ್ಮಧರ್ಶಿ  ಶಿವರಾಮ ಪಿ  ಧರ್ಮಧರ್ಶಿ   ಶಿವರಾಮ ಶರ್ಮ ಧರ್ಮಧರ್ಶಿ ರಘುರಾಜ ಕೆ ಎಮ್ ಧರ್ಮಧರ್ಶಿ ಶಿವಪ್ರಸಾದ್ ಧರ್ಮಧರ್ಶಿ

ಚರಿತ್ರೆ

  ಧರ್ಮಶ್ರೀ ಪ್ರತಿಷ್ಟಾನ(ರಿ.), ಈಶ್ವರಮಂಗಲ – ಈ ಸೇವಾಸಂಸ್ಥೆಯ ಇಚ್ಛಾಶಕ್ತಿ ಮತ್ತು ಕ್ರತು ಶಕ್ತಿಗಳ ಮೂರ್ತಸ್ವರೂಪವಾಗಿ ಆಂಜನೇಯ ಕ್ಷೇತ್ರವು ಎದ್ದು ನಿಂತಿದೆ! ಹನ್ನೊಂದು ಅಡಿ ಎತ್ತರದ ಶ್ರೇಷ್ಟ ಕೃಷ್ಣಶಿಲೆಯಲ್ಲಿ ಕೆತ್ತಿದ ಪಂಚಮುಖಿ ಆಂಜನೇಯನ ಏಕಶಿಲಾ ವಿಗ್ರಹ, ವಿವರಣಾ ಫಲಕಗಳ ಸಮೇತ ರಾಮಾಯಣದ ಕಥಾನಕಗಳ ನೂರರಷ್ಟು ಶಿಲ್ಪಕಲೆಯ ಕೆತ್ತನೆಯ ಸೊಗಡು; ನಿಸರ್ಗದತ್ತ ಕಲ್ಲು ಬಂಡೆಗಳಲ್ಲಿ ಕೆತ್ತಲಾಗಿರುವ ಆಂಜನೆಯನ ಜೀವನದ ಪುಣ್ಯ ಕಥಾಪ್ರಸಂಗಗಳು; ದೇವ ಜೀವ ಸತ್-ಸಂಬಂಧ ಸೂಚಕ ರಾಮ-ಹನುಮರ ವಿಗ್ರಹಗಳು – ಇವು ಈ ಕ್ಷೇತ್ರದ ವಿಷೇಶತೆಗಳು. ಈ […]