ಹನುಮಗಿರಿಗೆ ಸ್ವಾಗತ..

ಪೂರ್ವದಲ್ಲಿ ಸಹ್ಯಾದ್ರಿ ಬೆಟ್ಟಗಳ ಸಾಲುಗಳಿಂದ ಕೂಡಿದ ಮಲೆನಾಡು ಪ್ರದೇಶ,  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸುಳ್ಯ, ಮಾರ್ಗವಾಗಿ ಕಾವು ಎಂಬಲ್ಲಿ ದಕ್ಷಿಣಕ್ಕೆ ಹೋದರೆ ಈಶ್ವರಮಂಗಲ ಪೇಟೆ, ಈಶ್ವರಮಂಗಲ ವಿದ್ಯಾಸಂಸ್ಥೆಗಳ ಒತ್ತಿನಲ್ಲಿ ಎತ್ತರದ ಗುಡ್ಡ ಪ್ರದೇಶದಲ್ಲಿ  ಹಚ್ಚನೆಯ ಹಸಿರಿನಿಂದ ಕಂಗೊಳಿಸುವ ಸಸ್ಯ ಸಮೃದ್ಧವಾದ ಭೂಮಿ! ಪಡುವನ್ನೂರು ಮತ್ತು ನೆಟ್ಟಣಿಗೆ ಮೂಡ್ನೂರು ಗ್ರಾಮಗಳ ಗಡಿ ಭಾಗವಾದ ಅದೇ ಪ್ರದೇಶದಲ್ಲಿ ಅದೇ ಪ್ರದೇಶದಲ್ಲಿ ’ಹನುಮಗಿರಿ’ ಎಂದು ನಾಮಂಕಿತಗೊಂಡ ಆಂಜನೇಯ ಕ್ಷೇತ್ರವು ಪ್ರತಿಷ್ಟಾಪಿಸಲ್ಪಟ್ಟಿದೆ

 

ಸೇತುಬಂಧಕ್ಕಾಗಿ ಆಂಜನೇಯ ಹಿಮಾಲಯದಿಂದ ಸಂಜೀವಿನಿ ಪರ್ವತ ಎತ್ತಿಕ್ಕೊಂಡು ದಕ್ಷಿಣಕ್ಕೆ ತಂದನು. ಸೇತುಬಂದಕ್ಕೆ ಆ ಗಿರಿಯ ಅವಶ್ಯಕತೆ ಉಂಟಾಗಲಿಲ್ಲ, ಶ್ರೀ ರಾಮನ ಸಂಕಲ್ಪದಂತೆ ಅದನ್ನು ಗೋವಿಂದನ ಆವಾಸಸ್ಥಾನವಾಗಿ ವಜ್ರಗಿರಿಯಲ್ಲಿ ಸ್ಥಾಪಿಸಲಾಯಿತು. ಹನುಮಂತನು ಗಿರಿಯನ್ನು ಎತ್ತಿ ತರುತ್ತಿದ್ದಾಗ ಅದರ ಕೆಲವು ತುಣುಕುಗಳು ದಕ್ಷಿಣಪಥದ ಕೆಲವೆಡೆ ಕೆಲವೆಡೆ ಬಿದ್ದುವಂತೆ. ಕೊಟಚಾದ್ರಿ, ಬ್ರಹ್ಮಗಿರಿ ಮುಂತಾದುವು ಅದರ ಅಂಶಗಳು. ಈಶ್ವರಮಂಗಲದ ಹನುಮಗಿರಿಯು ಅವುಗಳಲ್ಲೊಂದು, ಆದುದರಿಂದಲೇ ಇಲ್ಲಿ ಪವಿತ್ರ ಕ್ಷೇತ್ರವು ನಿರ್ಮಾಣವಾಗಿದೆ ಎಂಬುದು ವಿದ್ವಾಂಸರ ಅಂಬೋಣ.