ಧರ್ಮಶ್ರೀ ಪ್ರತಿಷ್ಠಾನ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಮಳೆಯ ವಿಧಿ ಸುರಿಯೆ

ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ ಎಲ್ಲರೊಲಗೊಂದಾಗು – ಮಂಕುತಿಮ್ಮ

 ವರಕವಿಯಯೋಗಸೂತ್ರವೇ ಧರ್ಮಶ್ರೀ ಪ್ರತಿಷ್ಠಾನದ ಮೂಲ ಮಂತ್ರ. ಎಲ್ಲರೊಳಗೊಂದಾಗಿ ಸಮಾನತೆಯ ಒಂದೇ, ನಾವೆಲ್ಲರು ಒಂದೇ ಎಂಬ ಹಿರಿದಾದ ದೃಷ್ಟಿಕೋನ ಧರ್ಮಶ್ರೀ ಪ್ರತಿಷ್ಠಾನದ್ದು. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ನಂಬುಗೆಯೊಂದಿಗೆ ಧರ್ಮದ ಪುನರುತ್ಥಾನ, ಭಾರತೀಯ ಸಂಸೃತಿಯ ಪುನರುಜ್ಜೀವನ ಎಂಬ ತತ್ವಾದರ್ಶನದ ಅಡಿಗಟ್ಟಿನಲ್ಲಿ  ಮೂರ್ತೀಭವಿಸಿದ್ದೇ “ಧರ್ಮ ಪ್ರತಿಷ್ಠಾನ”. ಈಗ ಪ್ರತಿಷ್ಠಾನಕ್ಕೆ 5ನೇ ವರ್ಷದ ಸಂಭ್ರಮ. ಕಿರಿದಾದ ಅವಧಿಯಲ್ಲಿ 35ಕ್ಕಿಂಲೂ ಹೆಚ್ಚು ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಕಾರ್ಯಕ್ರಮಗಳನ್ನು ಆಯೋಜಿಸಿದ ಹೆಗ್ಗಳಿಕೆ ಪ್ರತಿಷ್ಠಾನದ್ದು. ಇದರ ಜೊತೆ ಜೊತೆಗೇ ಸಮಾಜದ ದೀನದಲಿತರಿಗೆ  ಧನಸಹಾಯ ನೀಡಿ, ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ಬೆಳಗುತಿರುವ ವಿದ್ಯಾಸಂಸ್ಥೆಗಳಿಗೆ ಆರ್ಥಿಕ ಸಹಾಯಹಸ್ತವನ್ನು ನೀಡಿದ ಹಿರಿಮೆ ಪ್ರತಿಷಾನದ್ದು. ಸಾರ್ವಜನಿಕರಿಂದ ಯಾವುದೇ ದೇಣಿಗೆ ಸಂಗ್ರಹಿಸದೇ ತಾವೆ ದುಡಿದ ತಮ್ಮ ಸ್ವಂತ ಉದ್ಡಿಮೆಯ ಫಲವನ್ನು “ಕೆರೆಯ ನೀರನ್ನು ಕೆರೆಗೆ ಚೆಲ್ಲಿ” ಎಂಬಂತೆ ಸಮಾಜದಿಂದ ಗಳಿಸಿದನ್ನು ಸಮಾಜಕ್ಕೆ ಅರ್ಪಿಸುವ ನೀತಿ. ಶೀಮಂತಿಕೆಯುಳ್ಳ ಗಣ್ಯರ ಒಗ್ಗೂಡುವಿಕೆ ಪ್ರತಿಷ್ಠಾನದ ಹಿಂದೆ ಇರುವ ಶಕ್ತಿ. ಶ್ರೀಯುತರಾದ ಕೊನೊತೋಟ ಮಹಾಬಲೆಶ್ವರ ಭಟ್, ನನ್ಯ ಅಚ್ಯುತ ಮೂಡೆತ್ತಾಯ, ಈಶ್ವರಮಂಗಲದ ಶಿವರಾಮ, ಕತ್ರಿಬೈಲು ಶಿವರಾಮ ಶರ್ಮ,ವಕೀಲರಾದ ಶಿವಪ್ರಸಾದ್, ಕೆ. ಎಂ. ರಘುರಾಜ – ಇವರು ನಿಸ್ವಾರ್ಥವಾಗಿ ಧರ್ಮಶ್ರೀ ಪ್ರತಿಷ್ಠಾನದ ಹೆಸರುನಲ್ಲಿಸಮಾಜದ ಸೇವಾ ಕೈಂಕರ್ಯಕ್ಕೆ ಕಟಿಬದ್ಧರಾದವರು.

ಇವುಗಳ ಜೊತೆಗೆ ಧರ್ಮಶ್ರೀ ಪ್ರತಿಷ್ಠಾನದ ಸಾಧನೆಯ ಕಿರೀಟಕ್ಕೆ ಹೊನ್ನಿನ ಗರಿ – ಹನುಮಗಿರಿ. ವಿಶ್ವದಲ್ಲೇ ಅತೀ ದೊಡ್ಡದೆಂಬ ಖ್ಯಾತಿಯ ಪಂಚಮುಖೀ ಆಂಜನೇಯನ ವಿಗ್ರಹ, ಹನುಮಾನ್(ಥೀಮ್ ಪಾರ್ಕ್) ಮಾನಸ ಉದ್ಯಾನವನ, ಸಂಜೀವಿನೀ ವನ, ಧ್ಯಾನ-ಜ್ಞಾನ ಮಂದಿರವನ್ನು ಒಳಗೊಂಡು ಸುಮಾರು 3.5 ಎಕ್ರೆ ವಿಸ್ತೀರ್ಣದಲ್ಲಿ ಮೂಡಿ ಬಂದ ಯೊಜನೆ ಅನನ್ಯ, ಅದ್ಭುತ. ಇಲ್ಲಿನ ಕಲ್ಲು ಕಲ್ಲುಗಳೂ ರಾಮ ಮಂತ್ರವನ್ನು ಜಪಿಸುತ್ತವೆ, ಹನುಮ ಮಂತ್ರವನ್ನು ಹಾಡುತ್ತವೆ. ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂಬ ಮಾತನ್ನು ನೆನಪಿಸುತ್ತದೆ. ಇದು ಧರ್ಮಶ್ರೀ ಪ್ರತಿಷ್ಠಾನದ ಶಾಶ್ವತ ಯೋಜನೆ. ಅಷ್ಟೇ ಅಲ್ಲ, ಜೀವನ ಶ್ರೇಷ್ಠ ಸಾಧನೆ. ಮನುಕುಲಕ್ಕೆ ಅಭೂತಪೂರ್ವ ಕೊಡುಗೆ.

ಧರ್ಮಶ್ರೀ ಪ್ರಶಸ್ತಿ

ಧರ್ಮಶ್ರೀ ಪ್ರಶಸ್ತಿಯನ್ನು ಧರ್ಮಶ್ರೀ ಪ್ರತಿಷ್ಟಾನ ಪ್ರಾರಂಭವಾದ ಮೂರನೇ ವರ್ಷ ಗೋಕರ್ಣ ಮಂಡಾಲಧೀಶ್ವರ ಶ್ರೀಮದ್ ರಾಘವೇಶ್ವರ ಭರತೀ ಮಹಾಸ್ವಾಮಿಜಿಗಳಿಗೆ ಮತ್ತು ನಾಲ್ಕನೇ ವರ್ಷ ಬಿಹಾರದ ಮಾಜಿ ರಾಜ್ಯಪಾಲರು ಮತ್ತು ನಿವೃತ್ತ ಮುಖ್ಯ ನ್ಯಾಧೀಶರು, ಉಚ್ಚ ನ್ಯಾಯಲಯ ಪಂಜಾಬ್ ಮತ್ತು ಹರಿಯಾಣ ನ್ಯಾಯಮೂರ್ತಿ ಡಾ! ರಾಮಾ ಜೋಯಿಸ್ರವರಿಗೆ  ನೀಡಲಾಯಿತು. ಐದನೇ ವರ್ಷ ಸರ್ವಜನ ಮಾನ್ಯರಾದ ಧರ್ಮಶ್ರೀ  ಕಾದಂಬರಿ ಖ್ಯಾತಿಯ, ಖ್ಯಾತ ಸಾಹಿತಿ ಶ್ರೀ ಎಸ್ . ಎಲ್. ಭೈರಪ್ಪ ಇವರಿಗೆ ಧರ್ಮಶ್ರೀ ಪ್ರಶಸ್ತಿ ಸಂದಿದೆ. ದಿಂನಾಂಕ 16-1-2010 ರಂದು  ಪುತ್ತೂರಿನ […]

ಮೈಲಿಗಲ್ಲುಗಳು

ಮೊದಲನೆಯ ವರ್ಷ ಬಲಿಪ ಯಕ್ಷವೈಭವ ಎಂಬ ಕಾರ್ಯಕ್ರಮ ಹಮ್ಮಿಕೊಂಡು, ಬಲಿಪ ನಾರಾಯಣ ಭಾಗವತರು ಮತ್ತು ಮಾಸ್ಟರ್ ಪೀಸ್ ಯಕ್ಷಗಾನ ತಾಳಮದ್ದಲೆಯ ದಾಖಲೀಕರಣ.  ಎರಡನೆಯ ವರ್ಷ ಅಗರಿ ಮತ್ತು ಉಡುವೆಕೋಡಿ ಯಕ್ಷ ವೈಭವ ಕಾರ್ಯಕ್ರಮ ಹಮ್ಮಿಕೊಂಡು, ಅಗರಿ ರಘುರಾಮ ಭಾಗವತರಿಗೆ ಮತ್ತು ಉದುವೆಕೋಡಿ ಸುಬ್ಬಪ್ಪಯ್ಯ ಮತ್ತು ಯಕ್ಷಗಾನ ಸಂಘಟಕರಾದ ಕೆ.ಸಿ. ಪಾಟಾಳಿ ಪಡುಮಲೆ ಇವರಿಗೆ ಸನ್ಮಾನ.

ಟ್ರಸ್ಟೀ ಬೋರ್ಡ್

ಮಹಾಬಲೇಶ್ವರಭಟ್ ಮಹಾಪೋಷಕರು ನಯನ ಅಚ್ಚುತ ಮುಡೆತಾಯ ಆಡಳಿತಧರ್ಮಧರ್ಶಿ ಶಿವರಾಮ ಪಿ ಧರ್ಮಧರ್ಶಿ ಶಿವರಾಮ ಶರ್ಮ ಧರ್ಮಧರ್ಶಿ ರಘುರಾಜ ಕೆ ಎಮ್ ಧರ್ಮಧರ್ಶಿ ಶಿವಪ್ರಸಾದ್ ಧರ್ಮಧರ್ಶಿ