ಹನುಮಾನ್ ಮಾನಸೋದ್ಯಾನ

ಎಲ್ಲೆಲ್ಲಿ ಮರ್ಯಾದಪೂರ್ಣ ದಾಸತ್ವ ನಮಗೆ ತೋರುತ್ತದೋ, ಅಲ್ಲಿ ಹನುಮಂತನೂ ನಮಗೆ ತೋರುತ್ತಾನೆ. ಹಾಗೆಯೇ ಹನುಮಂತನು ಚಿರಂಜೀವಿ, ಮುಖ್ಯಪ್ರಾಣ, ಮರ್ಯಾದಾ ದಾಸೋತ್ತಮ. ರಾಮಾಯಣ ಮಹಾಕಾವ್ಯದಲ್ಲಿ ಆಂಜನೇಯನ ಕಾರ್ಯ ಅದ್ಭುತ, ಅನುಕರಣೀಯ ಮತ್ತುಅವಿಸ್ಮರಣೀಯ.

ಹನುಮಗಿರಿಯಲ್ಲಿ ಗರುಢ ಮಂಟಪವನ್ನು ದಾಟಿ ಮುಂದೆ ಹೋದಾಗ ’ಹನುಮಾನ್ ಮಾನಸೋದ್ಯಾನ’ ಸಿಗುತ್ತದೆ. ಅದು ಅಲ್ಲಲ್ಲಿ ಏಕಶಿಲೆಗಳಿಂದ ಕೆತ್ತಿದಂತಹ ಆಂಜನೇಯನ ಜನನ ಮೊದಲ್ಗೊಂಡು ರಾಮಾವತಾರದ ಸಮಾಪ್ತಿಯ ತನಕದ ಹಾಗು ದ್ವಾಪರ ಯುಗದಲ್ಲಿ ಆಂಜನೇಯನ ಸೇವಾಕೈಂಕರ್ಯದ ಕಥಾನಕಗಳನ್ನು ಶಿಲೆಗಳಲ್ಲಿ ಕೆತ್ತಲಾಗಿದ್ದು, ಜೊತೆಗೆ ವಿವರಣೆಗಳನ್ನೂಕಾಣಬಹುದಾಗಿದೆ. ರಾಮಾಯಣ ಮತ್ತು ಹನುಮಂತನ ಜೀವನದ ಚರಿತ್ರಯನ್ನು ಶಿಲ್ಪ ಕಲೆಯ ಮೂಲಕ ಆಸ್ಪಾದಿಸುವ ಅವಕಾಶ ಹನುಮಗಿರಿಯಲ್ಲಿ ಮಾತ್ರ ಸಾಧ್ಯ.

ಈ ಮಾನಸೋಧ್ಯಾನದಲ್ಲಿ ಇರುವ ಹನುಮಂತನು ಭಗವಾನ್ ಶ್ರೀರಾಮಚಂದ್ರನನ್ನು ಭಕ್ತಿ ಪರವಶವಾಗಿ ಭಜಿಸುವ ಕೆತ್ತನೆಗಳಂತು ಅದ್ಭುತ ಮತ್ತು ಭಾವಾತ್ಮಕವಾಗಿ ಮೂಡಿ ಬಂದಿದೆ. ರಾತ್ರಿ ಹೊತ್ತು ದೀಪದ ಬೆಳಕಿನಲ್ಲಿ ಇವುಗಳು ವಿಶಿಷ್ಟ ಅನುಭವ ನೀಡುತ್ತದೆ.

ಹನುಮಾನ್ ಮಾನಸೋದ್ಯಾನದ ಒಂದು ಇಣುಕುನೋಟವನ್ನು ಆಧುನಿಕ ಫ್ಲ್ಯಾಷ್ ಚಿತ್ರಪ್ರದರ್ಶನದ ಮುಖಾಂತರ ಪಡೆಯಲು ಮೇಲ್ಕಂಡ ಚಿತ್ರದ ಮೇಲೆ ಕ್ಲಿಕ್ಕಿಸಿ..


ಹನುಮಾನ್ ಮಾನಸೋದ್ಯಾನ

 ಹನುಮಾನ್ ಮಾನಸೋದ್ಯಾನದ ಒಂದು ಇಣುಕುನೋಟವನ್ನು ಫೋಟೊಗಳನ್ನು ಗ್ಯಾಲರಿಯಲ್ಲಿ ನೋಡಲು ಫೋಟೊದ ಮೇಲೆ ಕ್ಲಿಕ್ಕಿಸಿ.