ಮಾನಸೋದ್ಯಾನಗಳು

ಶ್ರೀ ರಾಮ ಹನುಮರ ಜೀವನದ ದಿವ್ಯ ಸಂದೇಶಗಳ ನಿರೂಪನೆಯ ವಿಶ್ವದ ಏಕೈಕ ನಿರ್ಮಿತ ಮಾನಸೋದ್ಯಾನ

ರಾಮಾಯಣ ದರ್ಶನ

ರಾಮಾಯಣ ಸುಂದರ ಕಥಾನಕವು ಅದ್ಬುತ ಶಿಲ್ಪಕಲಾ ಕೆತ್ತನೆಯ ಮುಲಕ ಸಾಕಾರಗೊಂಡ ತಾಣ. ಶಿಲ್ಪಕಲೆಯ ವೈಭವವನ್ನು ಸಾದರ ಪಡಿಸುವುದರೊಂದಿಗೆ, ರಾಮಾಯಣದ ದಿವ್ಯ ಸಂದೇಶದ ಅನಾವರಣ, ವಿವರಣಾ ಫಲಕಗಳೊಂದಿಗೆ ನಿರ್ಮಿಸಲಾಗಿದೆ.

ಹನುಮ ದರ್ಶನ

ಪ್ರಕೃತಿದತ್ತ… ನೈಸರ್ಗಿಕ ಕಲ್ಲು ಬಂಡೆಗಳಲ್ಲಿ ಕೆತ್ತಲಾಗಿರುವ ಹನುಂತನ ಜೀವನದ ದಿವ್ಯ ಪುಣ್ಯ ಕಥಾ ಪ್ರಸಂಗಗಳು ಈ ಶತಮನಾದ ಅದ್ಭುತ ಕಾರ್ಯವೆಂದು ಪರಿಗನಿಸ ಬಹುದಾದ ಶ್ರೇಷ್ಠ ಕಲಾ ಪ್ರೌಢಿಮೆಯನ್ನು ಸಾರುವ ಶಿಲ್ಪವೈಭವ. ಶಿಲಾಫಲಕಗಳಲ್ಲಿ ವಿವರಣೆಗಳೊಂದಿಗೆ ನಿರ್ಮಿಸಲಾಗಿದೆ.

ರಾಮಾಯಣ ಮಾನಸೋದ್ಯಾನ

ಭಾರತದ ಸನಾತನ ಸಂಸ್ಕೃತಿಯನ್ನು ಸಾರುವ ಪುರಾಣ ಪ್ರಸಿದ್ದ ಮಹಾಕಾವ್ಯ ’ರಾಮಯಣ’. ಎಲ್ಲಿ ರಾಮನಿದ್ದಾನೋ, ಅಲ್ಲಿ ಹನುಮನಿದ್ದಾನೆ. ಎಲ್ಲಿ ಹನುಮನಿದ್ದಾನೋ, ಅಲ್ಲಿ ರಾಮನಿದ್ದಾನೆ. ರಾಮ ಹನುಮರದ್ದು ’ಅವಿನಾಭವ’ ಸಂಭಂಧ. ರಾಮ ಹನುಮರ ಮಹಿಮಾತಿಶಯಗಳಿಂದ ಕೂಡದ ದಿವ್ಯ ಕಥಾನವೇ ’ರಾಮಯಣ’ ಹನುಮಗಿರಿಯಲ್ಲಿ ರಾಮಯಣದ ಪ್ರಮಿಖ ಘಟಣೆಗಳನ್ನು ಶಿಲೆಯಲ್ಲಿ ಕೆತ್ತಿ, ಘಟಣೆಯ ವಿವರಹ್=ಗಳನ್ನು ಅಮೃತಶಿಲೆಯಲ್ಲಿ ಮುದ್ರಿಸಿ ಅದರೊಂದಿಗೆ ಕ್ರಮಬದ್ಧವಾಗಿ ಜೋಡಿಸಲಾಗಿದೆ. ರಾಮಾಯಣ ಮಾನಸೋಧ್ಯಾನದಲ್ಲಿ ಹೆಜ್ಜೆ ಹಾಕಿದರೆ, ಇಡೀ ರಾಮಾಯಣದ ಕಥಾನಕವೇ ಕಣ್ಣ ಮುಂದೆ ಬಂದಂತಾಗುತ್ತದೆ. ಭಾರತೀಯ ಸಂಸ್ಕೃತಿಯ ಆದರ್ಶ ಕಾವ್ಯ ರಾಮಾಯಣದ […]