ಧರ್ಮಶ್ರೀ ಪ್ರಶಸ್ತಿಯನ್ನು ಧರ್ಮಶ್ರೀ ಪ್ರತಿಷ್ಟಾನ ಪ್ರಾರಂಭವಾದ ಮೂರನೇ ವರ್ಷ ಗೋಕರ್ಣ ಮಂಡಾಲಧೀಶ್ವರ ಶ್ರೀಮದ್ ರಾಘವೇಶ್ವರ ಭರತೀ ಮಹಾಸ್ವಾಮಿಜಿಗಳಿಗೆ ಮತ್ತು ನಾಲ್ಕನೇ ವರ್ಷ ಬಿಹಾರದ ಮಾಜಿ ರಾಜ್ಯಪಾಲರು ಮತ್ತು ನಿವೃತ್ತ ಮುಖ್ಯ ನ್ಯಾಧೀಶರು, ಉಚ್ಚ ನ್ಯಾಯಲಯ ಪಂಜಾಬ್ ಮತ್ತು ಹರಿಯಾಣ ನ್ಯಾಯಮೂರ್ತಿ ಡಾ! ರಾಮಾ ಜೋಯಿಸ್ರವರಿಗೆ ನೀಡಲಾಯಿತು.
ಐದನೇ ವರ್ಷ ಸರ್ವಜನ ಮಾನ್ಯರಾದ ಧರ್ಮಶ್ರೀ ಕಾದಂಬರಿ ಖ್ಯಾತಿಯ, ಖ್ಯಾತ ಸಾಹಿತಿ ಶ್ರೀ ಎಸ್ . ಎಲ್. ಭೈರಪ್ಪ ಇವರಿಗೆ ಧರ್ಮಶ್ರೀ ಪ್ರಶಸ್ತಿ ಸಂದಿದೆ. ದಿಂನಾಂಕ 16-1-2010 ರಂದು ಪುತ್ತೂರಿನ ಜೈನಭವನದ ಆವರಣದಲ್ಲಿ ದೊಡ್ಡ ಮಟ್ಟಿನ ಕಾರ್ಯಕ್ರಮ ಪುತ್ತೂರಿನ ಸಾರ್ವಜನಿಕರ ಸಹಕಾರದೊಂದಿಗೆ ಆಯೋಜಿಸಲ್ಪಟ್ಟಿತ್ತು. ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅದ್ಯಕ್ಷತೆಯಲ್ಲಿ ನಡೆದ, ವಿಚಾರಗೊಷ್ಠಿಯಲ್ಲಿ ಶ್ರೀ ಎಸ್. ಎಲ್. ಭೈರಪ್ಪನವರು ’ಜಾಗತೀಕರನದ ಹಿನ್ನಲೆಯಲ್ಲಿ ಭಾರತದ ಸಂಸೃತಿ ಮತ್ತು ಭವಿಷ್ಯದ ಸವಾಲುಗಳು’ ಬಗ್ಗೆ ವಿಚಾರ ಮಂಡನೆ ಮಾಡಿದ್ದಾರೆ.
ಕನಸುಗಳೇ ಇಲ್ಲದ ಹಾದಿಯಲ್ಲಿ ನಡೆಯುದು ಹೇಗೆ ಎಂಬ ಕವಿವಾಣಿಗೆ ಅರ್ಥವಿಲ್ಲವೆಂಬಂತೆ ಈಗ ರಾಜ್ಯಮಟ್ಟಕ್ಕೆ ಸೀಮಿತ ವಾಗಿರುವ ತಮ್ಮ ಚಟುವಟಿಕೆಗಳನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸುವ ಕನಸು ಪ್ರತಿಷ್ಟಾನದಾಗಿದೆ.ಅದರ ಫಲ ಶೃತಿಯೇ ಈ ಬಾರಿ ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಅಧ್ಯಕ್ಷ, ರಾಮಜನ್ಮ ಭೂಮಿ ಮುಕ್ತಿ ಹೋರಾಟದ ಮುಖ್ಯ ಸೂತ್ರಧಾರ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಕಟ ಸಹಚರ, ಅಸ್ಪೃಶ್ಯತೆ, ಮತಾಂತರ, ಇಸ್ಲಾಮ್ ಭಯೋತ್ಪಾದನೆಯ ವಿರುದ್ಧ ನಿತ್ಯನಿರಂತರ ಹೋರಾಟಗಾರ, ಹಿಂದೂ ಧರ್ಮದ ಆಧುನಿಕ ಯುಗ ಪ್ರವರ್ತನಕಾರರಾದ ಸನ್ಮಾನ್ಯ ಅಶೋಕ್ ಸಿಂಘಾಲ್-ರವರಿಗೆ ’ಧರ್ಮಶ್ರೀ’ ಪ್ರಶಸ್ತಿಯ ಪುರಸ್ಕಾರ.