ದೇಶ-ವಿವರ

ಪೂರ್ವದಲ್ಲಿ ಸಹ್ಯಾದ್ರಿ ಬೆಟ್ಟ ಸಾಲುಗಲ ನಿಸರ್ಗರಮಣೀಯ ಮಲೆನಾಡಿನ ಹಚ್ಚನೆಯ ಹಸಿರು – ಪಶ್ಚಿಮದಲ್ಲಿ ಸಮುದ್ರ ಕರಾವಳಿಯ ಪ್ರಶಾಂತ ವಾತಾವರಣ, ಮಧ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ –ಪುತ್ತೂರಿನಿಂದ ಕಾವು ಮಾರ್ಗವಾಗಿ 22 ಕಿ.ಮೀ.ಸಾಗಿದಾಗ ಸಿಗುವ ರಮಣೀಯ ಪ್ರದೇಶವೇ ಈಶ್ವರಮಂಗಲ. ಇಲ್ಲಿರುವ ವಿದ್ಯಾಸಂಸ್ಥೆಗಳ ಒತ್ತಿನಲ್ಲಿರುವ ಉನ್ನತ ಪ್ರದೇಶವೇ ಹನುಮಗಿರಿ.

 

ಹನುಮಗಿರಿಯಿಂದ ಒಂದು ಕಿ.ಮೀ ದಕ್ಷಿಣದಲ್ಲಿ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ಮತ್ತು ಪೂಮಾಣಿ -ಕಿನ್ನಿಮಾಣಿ ದೈವಗಳ ಮಾಡ ಇದೆ. ಎರದೂ ಕಿ. ಮೀ ದುಉರದಲ್ಲಿ ಪಶ್ಚಿಮ – ನೈರುತ್ಯದಲ್ಲಿ ಕುತ್ಯಾಳ ಪಾದೆ ಶ್ರೀ ಮಹಾವಿಷ್ಣು ದೇವಸ್ಥಾನ; ನಾಲ್ಕು ಕಿ. ಮೀ ದೂರದಲ್ಲಿ ಪಡುಮಲೆ ಪೂಮಾಣಿ – ಕಿನ್ನಿಮಾಣಿ ದೈವಸ್ಥಾನ; ಆರು ಕಿ.ಮೀ. ಪಶ್ಚಿಮ ಆಗ್ನೇಯದಲ್ಲಿ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಇದೆ. ತೌಳವ ಸಂಸ್ಕೃತಿಯಲ್ಲಿ ಇತಿಹಾಸ ಪ್ರಸಿದ್ಧರಾಗಿರುವ ಕಾರಣಿಕ ದೈವಗಳಾದ ಕೋಟಿ-ಚೆನ್ನಯರ ಜನ್ಮಸ್ಥಳ ಪಡುಮಲೆ! ಸಾಂಸ್ಕೃತಿಕ- ಜಾನಪದ ವಿಚಾರಗಳಿಗೆ ಪ್ರಸಿದ್ಧವಾಗಿರುವ ಪಡುಮಲೆಯು ಈಗಗಲೇ ಪ್ರವಸೋದ್ಯಮ ಇಲಾಖೆಯಿಂದ ಪ್ರವಾಸಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಗುರುತಿಸಲ್ಪಟ್ಟಿರುತ್ತದೆ. ಶಿಲ್ಪಕಲಾ ವೈಭವವನ್ನು ಸಾರುವ ಹನುಮಗಿರಯು ಪ್ರವಾಸಿ ಕೇಂದ್ರವಾಗಿ ಪರಿಗಣ್ಸಲ್ಪಟ್ಟಿದೆ.

ಮಾರ್ಗ-ದರ್ಶನ

ಶ್ರೀಕ್ಷೇತ್ರ ಹನುಮಗಿರಿಯು ಪುತ್ತೂರು ತಾಲೂಕಿನ ಈಶ್ವರಮಂಗಲ ಪೇಟೆಯ ಪಕ್ಕದಲ್ಲಿದ್ದು, ಈಶ್ವರಮಂಗಲಕ್ಕೆ ರಸ್ತೆ ಮುಖಾಂತರ ಬರುವುದಾದಲ್ಲಿ ಇತ್ತಕಡೆ ಮಂಗಳೂರು –ಪುತ್ತೂರು – ಕಾವು  ಮಾರ್ಗವಾಗಿಯೂ, ಅಲ್ಲದೇ ಬೆಂಗಳೂರಿಂದಾದಲ್ಲಿ, ಉಪ್ಪಿನಂಗಡಿ – ಪುತ್ತೂರು –  ಕಾವು ಮಾರ್ಗವಾಗಿಯೂ, ಅತ್ತ ಮೈಸೂರು, ಮಡಿಕೇರಿ ಕಡೆಯಿಂದ ಆಗಮಿಸುವವರು ಸುಳ್ಯ – ಪುತ್ತೂರು ಮಾರ್ಗವಾಗಿ ಕಾವು ಎಂಬಲ್ಲಿ ಈಶ್ವರಮಂಗಲದ ಸಂಪರ್ಕ ರಸ್ತೆಯಲ್ಲಿ ಬಂದು ಈಶ್ವರಮಂಗಲವನ್ನು ತಲುಪಬಹುದು. ಅತೀ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಮಂಗಳೂರು – ಬಜ್ಪೆ ವಿಮಾನ ನಿಲ್ದಾಣ, ಸುಮಾರು 71ಕಿ.ಮೀ. ದೂರದಲ್ಲಿದೆ.  ರೈಲುಮಾರ್ಗದ […]