ತ್ರೇತಾಯುಗದಲ್ಲಿ ಶ್ರೀರಾಮ ಮತ್ತು ರಾವಣ ಇವರ ನಡುವೆ ಯುದ್ಧವಾಯಿತು. ಆಗ ನಿರ್ಮಾಣವಾಗಿದ್ದ ರಾಕ್ಷಸರು ಪಾತಾಳದಿಂದ ಸೂಕ್ಷ್ಮದಿಂದ ಬಂದಿದ್ದಾರೆ. ಅದರಿಂದಾಗಿ ಈ ಗಲಭೆಗಳು ಆದವು. ತ್ರೇತಾಯುಗದಲ್ಲಿ ಶ್ರೀರಾಮ-ರಾವಣನ ಯುದ್ಧದ ಸಮಯದಲ್ಲಿ ಅಹಿರಾವಣ ಮತ್ತು ಮಹಿರಾವಣ ಇವರಿಬ್ಬರು ರಾಕ್ಷಸರು ಪಾತಾಳದಿಂದ ನಿರ್ಮಾಣವಾದರು. ಆಗ ಮಾರುತಿರಾಯನು ಅವರನ್ನು ಕೊಂದನು. ಅದರಿಂದ ಮಾರುತಿರಾಯನು ರಾಕ್ಷಸರ ಉದ್ಧಾರವನ್ನೇ ಮಾಡಿದನು. ನಂತರ ಪಾತಾಳದಲ್ಲಿ ಆ ರಾಕ್ಷಸರಿಗಿಂತ ಭಯಂಕರ ದೊಡ್ಡ ರಾಕ್ಷಸರು ನಿರ್ಮಾಣವಾದರು. ಈ ರಾಕ್ಷಸರು ಮಾರುತಿರಾಯನಿಂದ ಸಾಯುತ್ತಿರಲಿಲ್ಲ. ಅವರನ್ನು ನಾಶಮಾಡಲು ಮಾರುತಿರಾಯನು ಪಂಚಮುಖಿ ಹನುಮಾನನ ಅವತಾರವನ್ನು ತೆಗೆದುಕೊಂಡನು. ಪ.ಪೂ.ಶ್ರೀಧರಸ್ವಾಮಿಯವರು ಇದರ ಹಿನ್ನೆಲೆಯಲ್ಲಿನ ಕಥೆಯನ್ನು ಪ.ಪೂ. ಭಗವಾನದಾಸ ಮಹಾರಾಜರಿಗೆ ಹೇಳಿದರು. ಮಹಿರಾವಣನನ್ನು ವಧಿಸಲು ಮಾರುತಿ ಪಾತಾಳಕ್ಕೆ ಹೋದನು. ಅಲ್ಲಿನ ಐದು ದೀಪಗಳನ್ನು (ಐದು ರಾಕ್ಷಸರ) ಒಂದೇ ಸಮಯದಲ್ಲಿ ವಿನಾಶ ಮಾಡಿ (ಅಂದರೆ ಆ ಐದು ದೀಪಗಳನ್ನು ಆರಿಸದೆ) ಮಹಿರಾವಣನ ಮರಣವಿಲ್ಲವೆಂದು ಹನುಮಂತನಿಗೆ ಅರಿವಾಯಿತು. ಅದರಿಂದಾಗಿ ಆ ಐದು ದೀಪಗಳನ್ನು ಒಂದೇ ಸಮಯದಲ್ಲಿ ನಾಶ ಮಾಡದೇ ಪರ್ಯಾಯವಿರಲಿಲ್ಲ. ಆ ಐದು ರಾಕ್ಷಸರನ್ನು ಒಂದೇ ಸಮಯದಲ್ಲಿ ಕೊಲ್ಲಲು ಮಾರುತಿಯು ಪಂಚಮುಖಿ ರೂಪವನ್ನು ಧರಿಸಿದನು.
ಮಾರುತಿಯ ಪಂಚಮುಖಗಳು ಮತ್ತು ಅವುಗಳ ಕಾರ್ಯ
ಮಾರುತಿಯ ಐದು ಮುಖಗಳು ಬೇರೆ ಬೇರೆ ಶಕ್ತಿ ಮತ್ತು ಸಾಮರ್ಥ್ಯಗಳ ಪ್ರತೀಕಗಳಾಗಿವೆ. ಈ ಐದು ಮುಖಗಳು ಮತ್ತು ಅವುಗಳ ಕಾರ್ಯಗಳು ಮುಂದಿನಂತಿವೆ.
ಐದು ದೀಪಗಳಲ್ಲಿ ಐದನೇ ಅಸುರಾಸುರ ರಾಕ್ಷಸ, ಪಂಚಮುಖಿ ಮಾರುತಿಯ ಪಾದದ ಕೆಳಗಡೆಯಲ್ಲಿರುವ ರಾಕ್ಷಸನಾಗಿದ್ದಾನೆ. ಪಂಚಮುಖಿ ಮಾರುತಿಯು ಒಂದರ್ಥದಲ್ಲಿ ಮಾನವೀ ಜೀವನದ ಎಲ್ಲ ಅಂಗಗಳ ವಿಕಾಸ ಮಾಡಿಸಿ ತರುವುದಕ್ಕಾಗಿ ಮಹತ್ವ ಪೂರ್ಣ ಸಾಧನವಾಗಿದೆ.